Index   ವಚನ - 320    Search  
 
ಸಂಸಾರವೆಂಬ ಸಾಗರದೊಳು ಬಿದ್ದು ಮುಳುಗಿದೆನಯ್ಯ. ತಲೆಯುದ್ದವೆಂಬೆನೆ? ತಲೆಯುದ್ದವಲ್ಲ. ಉರದುದ್ದವೆಂಬೆನೆ? ಉರದುದ್ದವಲ್ಲ. ಕೊರಳುದ್ದವೆಂಬೆನೆ? ಕೊರಳುದ್ದವಲ್ಲ. ಶಿರದುದ್ದವೆಂಬೆನೆ? ಶಿರದುದ್ದವಲ್ಲ. ಮುಗಿಲುದ್ದವಾದ ಬಳಿಕ ಇನ್ನೇವೆ ಇನ್ನೇವೆನಯ್ಯಾ? ಸಂಸಾರಸಾಗರದೊಳು ಬಿದ್ದು ಮುಳುಗಿಹನ ತೆಗೆದು ಕಾಯಯ್ಯ ಕಾಯಯ್ಯ ಅಪ್ರಮಾಣಕೂಡಲಸಂಗಮದೇವಾ.