Index   ವಚನ - 343    Search  
 
ಇನ್ನೊಂದು ಪ್ರಕಾರದ ಅಂಗಸ್ಥಲವೆಂತೆಂದಡೆ: ಐಕ್ಯ ಶರಣಸ್ಥಲವೆರಡು ಯೋಗಾಂಗ. ಪ್ರಾಣಲಿಂಗಿ ಪ್ರಸಾದಿಸ್ಥಲವೆರಡು ಭೋಗಾಂಗ. ಮಾಹೇಶ್ವರ ಭಕ್ತಸ್ಥಲವೆರಡು ತ್ಯಾಗಾಂಗ. ಇದಕ್ಕೆ ಈಶ್ವರೋsವಾಚ: ಯೋಗಾಂಗಮೈಕ್ಯಂ ಶರಣಂ ಸ್ಥಲಮಿತ್ಯುಭಯಂ ಭವೇತ್ | ಪ್ರಾಣಲಿಂಗಂ ಪ್ರಸಾದೀತಿ ದ್ವಯಂ ಭೋಗಾಂಗಮಿಷ್ಯತೇ || ಮಾಹೇಶ್ವರಸ್ಥಲಂ ಭಕ್ತಸ್ಥಲಮಿತ್ಯುಭಯಸ್ತಥಾ | ತ್ಯಾಗಾಂಗಂ ಭವೇನ್ನಿತ್ಯಂ ಪ್ರೋಚ್ಯತೇ ಪಾರಮಾರ್ಥಿಕೈಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.