Index   ವಚನ - 360    Search  
 
ಶ್ರೀಗುರುಲಿಂಗಭಾವವಿಲ್ಲದ ನಿರ್ಭಾವಲಿಂಗವ ಭಾವಸ್ಥಲಕ್ಕೆ ತಂದು ಆ ಭಾವಸ್ಥಲದ ಲಿಂಗವ ಮನಸ್ಥಲಕ್ಕೆ ತಂದು ಆ ಮನಸ್ಥಲದ ಲಿಂಗವ ದೃಷ್ಟಿಸ್ಥಲಕ್ಕೆ ತಂದು ಆ ದೃಷ್ಟಿಸ್ಥಲದ ಲಿಂಗವ ಕರಸ್ಥಲಕ್ಕೆ ತಂದು ಆ ಕರಸ್ಥಲದ ಮೂರ್ತಿಯ ಧ್ಯಾನಿಸುವುದೆ ಧ್ಯಾನಯೋಗ ನೋಡಾ. ಇದಕ್ಕೆಈಶ್ವರೋsವಾಚ: ``ಯಥಾ ಕಲಾ ತಥಾ ಭಾವಃ ಯಥಾ ಭಾವಸ್ತ್ರಥಾ ಮನಃ | ಯಥಾ ಮನಸ್ತಥಾ ದೃಷ್ಟಿಃ ಯಥಾ ದೃಷ್ಟಿಸ್ತಥಾ ಸ್ಥಲಂ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.