ಏನೂ ಏನೂ ಎನಲಿಲ್ಲದಂದು ಮಹಾಘನಕ್ಕೆ ಘನವಾದ
ಮಹಾಘನ ನಿರಂಜನಾತೀತಪ್ರಣವದ ನೆನಹು ಮಾತ್ರದಲ್ಲಿ
ನಿರಂಜನಪ್ರಣವ ಉತ್ಪತ್ಯವಾಯಿತ್ತು.
ಆ ನಿರಂಜನಪ್ರಣವದ ನಿರ್ದೇಶ ಸ್ಥಲದ ವಚನವೆಂತೆಂದಡೆ:
ಅವಾಚ್ಯಪ್ರಣವ ಕಲಾಪ್ರಣವ ಉತ್ಪತ್ಯವಾಗದತ್ತತ್ತ,
ಪ್ರಣವನಾದ ಪ್ರಣವಬಿಂದು ಪ್ರಣವಕಲೆಗಳುತ್ಪತ್ಯವಾಗದತ್ತತ್ತ,
ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Ēnū ēnū enalilladandu mahāghanakke ghanavāda
mahāghana niran̄janātītapraṇavada nenahu mātradalli
niran̄janapraṇava utpatyavāyittu.
Ā niran̄janapraṇavada nirdēśa sthalada vacanaventendaḍe:
Avācyapraṇava kalāpraṇava utpatyavāgadattatta,
praṇavanāda praṇavabindu praṇavakalegaḷutpatyavāgadattatta,
niran̄janapraṇavavāgiddanayya illadante
nam'ma apramāṇakūḍalasaṅgamadēva