Index   ವಚನ - 397    Search  
 
ಸಪ್ತಕೋಟಿ ಮಹಾಮಂತ್ರ ವಿಶಾಲವಾಗದಂದು, ತೊಂಬತ್ತುನಾಲ್ಕು ಪದ ವಿಶಾಲವಾಗದಂದು, ವರ್ಣ ಐವತ್ತೆರಡು ವಿಶಾಲವಾಗದಂದು, ಇನ್ನೂರಾ ಇಪ್ಪತ್ತುನಾಲ್ಕು ಭುವನ ವಿಶಾಲವಾಗದಂದು, ತೊಂಬತ್ತಾರುತತ್ತ್ವ ವಿಶಾಲವಾಗದಂದು, ಅರುವತ್ತುನಾಲ್ಕು ಕಲೆಜ್ಞಾನ ವಿಶಾಲವಾಗದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.