Index   ವಚನ - 448    Search  
 
ಇನ್ನು ಆ ಪ್ರಣವದ ತತ್ಸ್ಥಾನವೆಂತೆಂದಡೆ: ಪ್ರಥಮ ತಾರಕಸ್ವರೂಪವಾಗಿಹುದು. ಎರಡನೆಯದು ದಂಡಸ್ವರೂಪವಾಗಿಹುದು. ಮೂರನೆಯದು ಕುಂಡಲಾಕಾರವಾಗಿಹುದು. ನಾಲ್ಕನೆಯದು ಅರ್ಧಚಂದ್ರಾಕಾರವಾಗಿಹುದು. ಐದನೆಯದು ದರ್ಪಣಾಕಾರವಾಗಿಹುದು. ಆರನೆಯದು ಜ್ಯೋತಿಸ್ವರೂಪವಾಗಿಹುದು ನೋಡಾ. ಇದಕ್ಕೆ ಈಶ್ವರೋsವಾಚ: ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠ ಜ್ಯೋತಿಸ್ವರೂಪಕಂ | ಇತಿ ಪ್ರಣವ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ