ಆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಸ್ವರೂಪದಲ್ಲಿ ಸದ್ಯೋಜಾತಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ
ಅಘೋರಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ನಿರ್ಭಾವಮುಖ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಈಶ್ವರೋsವಾಚ-ಶಿವಧರ್ಮಸೂತ್ರೇ:
ಓಂಕಾರತಾರಕಸ್ವರೂಪೇ ಸದ್ಯೋಜಾತಂ ಚ ಜಾಯತೇ |
ಓಂಕಾರದಂಡ ಸ್ವರೂಪೇ ವಾಮದೇವಂ ಚ ಜಾಯತೇ ||
ಓಂಕಾರಕುಂಡಲಾಕಾರೇ ಅಘೋರಂ ಚಾಪಿ ಜಾಯತೇ |
ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ ||
ಓಂಕಾರದರ್ಪಣಾಕಾರೇ ಈಶಾನ್ಯಂ ಚ ಸ ಜಾಯತೇ ||
ಓಂಕಾರ ಜ್ಯೋತಿರೂಪೇ ಚ ನಿರ್ಭಾವಃ ತತ್ರ ಜಾಯತೇ ||
ಇತಿ ಷಟ್ಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍajyōtirmayavāgiha gōḷakākāra praṇavada
tārakasvarūpadalli sadyōjātamukha utpatyavāyittu.
Ā praṇavada daṇḍakasvarūpadalli vāmadēvamukha utpatyavāyittu.
Ā praṇavada kuṇḍalākāradalli
aghōramukha utpatyavāyittu.
Ā praṇavada ardhacandrakadalli tatpuruṣamukha utpatyavāyittu.
Ā praṇavada darpaṇākāradalli īśānamukha utpatyavāyittu.
Ā praṇavada jyōtisvarūpadalli
nirbhāvamukha utpatyavāyittu nōḍā.
Idakke īśvarōsvāca-śivadharmasūtrē:
Ōṅkāratārakasvarūpē sadyōjātaṁ ca jāyatē |
ōṅkāradaṇḍa svarūpē vāmadēvaṁ ca jāyatē ||
ōṅkārakuṇḍalākārē aghōraṁ cāpi jāyatē |
ōṅkāra ardhacandrē ca tatpuruṣaṁ ca jāyatē ||
ōṅkāradarpaṇākārē īśān'yaṁ ca sa jāyatē ||
ōṅkāra jyōtirūpē ca nirbhāvaḥ tatra jāyatē ||
iti ṣaṭmukhaṁ dēvi sthānasthānēṣu jāyatē ||''
intendudāgi, apramāṇakūḍalasaṅgamadēvā.