ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು ,
ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು ,
ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು ,
ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು ,
ಈಶಾನಮಖದಲ್ಲಿ ಆಕಾಶ ಪುಟ್ಟಿತ್ತು ,
ಪ್ರಣವದ ಅರ್ಧಚಂದ್ರಕದಲ್ಲಿ ಮನ ಪುಟ್ಟಿತ್ತು ನೋಡಾ.
ಇದಕ್ಕೆ ಉತ್ತರವಾತುಲಾಗಮೇ:
ಸದ್ಯೋಜಾತಾದ್ಭವೇದ್ಭೂಮಿಃ ವಾಮದೇವಾದ್ಭವೇತ್ ಜಲಂ |
ಅಘೋರಾದ್ವಹ್ನಿರುತ್ಪತ್ತಿಃ ತತ್ಪುರುಷಾದ್ವಾಯೋರುದ್ಭವಃ
ಈಶಾನಾದ್ಗಗನಂ ಜಾತಂ ಅರ್ಧಚಂದ್ರಾತ್ ಮನೋದ್ಭವಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Sadyōjātamukhadalli pr̥thvi puṭṭittu,
vāmadēvamukhadalli appu puṭṭittu,
aghōramukhadalli agni puṭṭittu,
tatpuruṣamukhadalli vāyu puṭṭittu,
īśānamakhadalli ākāśa puṭṭittu,
praṇavada ardhacandrakadalli mana puṭṭittu nōḍā.
Idakke uttaravātulāgamē:
Sadyōjātādbhavēdbhūmiḥ vāmadēvādbhavēt jalaṁ |
aghōrādvahnirutpattiḥ tatpuruṣādvāyōrudbhavaḥ
īśānādgaganaṁ jātaṁ ardhacandrāt manōdbhavaṁ ||''
intendudāgi, apramāṇakūḍalasaṅgamadēvā.