Index   ವಚನ - 460    Search  
 
ಇನ್ನೊಂದು ಪ್ರಕಾರದ ಪಂಚಭೂತದ ಮನದ ನೆಲೆಯದೆಂತೆಂದಡೆ: ಆವ ಠಾವು ಕಠಿಣವಾಗಿಹುದು ಆ ಠಾವು ಪೃಥ್ವಿಯೆಂಬ ಮಹಾಭೂತ. ಆವ ಠಾವು ಮೃದುವಾಗಿಹುದು ಆ ಠಾವು ಅಪ್ಪುವೆಂಬ ಮಹಾಭೂತ. ಆವ ಠಾವು ಉಷ್ಣವಾಗಿಹುದು ಆ ಠಾವು ಅಗ್ನಿಯೆಂಬ ಮಹಾಭೂತ. ಆವ ಠಾವು ಚಲನೆಯಾಗಿಹುದು ಆ ಠಾವು ವಾಯುವೆಂಬ ಮಹಾಭೂತ. ಆವ ಠಾವು ಬಯಲಾಗಿಹುದು ಆ ಠಾವು ಆಕಾಶವೆಂಬ ಮಹಾಭೂತ. ಆವ ಠಾವು ನೆನವಾಗಿಹುದು ಆ ಠಾವು ಮನವೆಂಬ ಮಹಾಭೂತ ನೋಡಾ ಅಪ್ರಮಾಣಕೂಡಲಸಂಗಮದೇವಾ.