Index   ವಚನ - 470    Search  
 
ಆಚಾರಲಿಂಗದಲ್ಲಿ ನಿವೃತ್ತಿಕಲೆ ಇಹುದು. ಗುರುಲಿಂಗದಲ್ಲಿ ಪ್ರತಿಷ್ಠಾಕಲೆ ಇಹುದು. ಶಿವಲಿಂಗದಲ್ಲಿ ವಿದ್ಯಾಕಲೆ ಇಹುದು. ಜಂಗಮಲಿಂಗದಲ್ಲಿ ಶಾಂತಿಕಲೆ ಇಹುದು. ಪ್ರಸಾದಲಿಂಗದಲ್ಲಿ ಶಾಂತ್ಯತೀತಕಲೆ ಇಹುದು. ಮಹಾಲಿಂಗದಲ್ಲಿ ಶಾಂತ್ಯತೀತೋತ್ತರಕಲೆ ಇಹುದು ನೋಡಾ. ಇದಕ್ಕೆ ಆದಿತ್ಯಸಂಹಿತಾಯಾಂ: ಆಚಾರೇಚ ನಿವೃತ್ತೀ ಚ ಗುರುಲಿಂಗೇ ಪ್ರತಿಷ್ಠಿತಂ | ವಿದ್ಯಾಚ ಶಿವಲಿಂಗೌ ಚ ತಥಾ ಶಾಂತಿಕಲಾ ಚರೇತ್ || ಶಾಂತ್ಯತೀತ ವಿಶುದ್ಧೌ ಚ ಮಹಾಲಿಂಗೇ ಮಹತ್ಕಲಾ | ಇತಿ ಷಷ್ಠಕಲಾನ್ಯಾಸಂ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.