ಇನ್ನು ಷಡ್ವಿಧಭಕ್ತಿಯ ನೆಲೆ ಅದೆಂತೆಂದಡೆ:
ಆಧಾರಚಕ್ರದಲ್ಲಿ ಸದ್ಭಕ್ತಿ ಇಹುದು.
ಸ್ವಾಧಿಷ್ಠಾನಚಕ್ರದಲ್ಲಿ ನೈಷ್ಠಿಕಾಭಕ್ತಿ ಇಹುದು.
ಮಣಿಪೂರಕಚಕ್ರದಲ್ಲಿ ಅವಧಾನಭಕ್ತಿ ಇಹುದು.
ವಿಶುದ್ಧಿಚಕ್ರದಲ್ಲಿ ಆನಂದಭಕ್ತಿ ಇಹುದು.
ಆಜ್ಞಾಚಕ್ರದಲ್ಲಿ ಸಮರಸಭಕ್ತಿ ಇಹುದು ನೋಡಾ.
ಇದಕ್ಕೆ ಚಕ್ರಾತೀತಾಗಮೇ:
ಆಧಾರೇ ಭೃತ್ಯಭಕ್ತಿಶ್ಚ ಸ್ವಾಧಿಷ್ಠೇ ನೈಷ್ಠಿಕಂ ತಥಾ |
ಅವಧಾನ ತಥಾ ಪೂರೇ ಅನುಭಾವಂಚಾನಾಹತೇ ||
ಆನಂದಾಶ್ಚ ವಿಶುದ್ಧಿಶ್ಚ ಆಜ್ಞೇ ಸಮರಸಂ ಭವೇತ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhabhaktiya nele adentendaḍe:
Ādhāracakradalli sadbhakti ihudu.
Svādhiṣṭhānacakradalli naiṣṭhikābhakti ihudu.
Maṇipūrakacakradalli avadhānabhakti ihudu.
Viśud'dhicakradalli ānandabhakti ihudu.
Ājñācakradalli samarasabhakti ihudu nōḍā.
Idakke cakrātītāgamē:
Ādhārē bhr̥tyabhaktiśca svādhiṣṭhē naiṣṭhikaṁ tathā |
avadhāna tathā pūrē anubhāvan̄cānāhatē ||
ānandāśca viśud'dhiśca ājñē samarasaṁ bhavēt ||''
intendudāgi, apramāṇakūḍalasaṅgamadēvā