Index   ವಚನ - 489    Search  
 
ಇನ್ನು ಋಗ್ವೇದ ಯಜುರ್ವೇದ ಅಥರ್ವಣವೇದ ಗಾಯತ್ರಿ ಅಜಪೆಯ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಋಗ್ವೇದವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ಯಜುರ್ವೇದವಿಹುದು. ಮಣಿಪೂರಕಚಕ್ರದಲ್ಲಿ ಸಾಮವೇದವಿಹುದು. ಅನಾಹತಚಕ್ರದಲ್ಲಿ ಅಥರ್ವಣವೇದವಿಹುದು. ವಿಶುದ್ಧಿಚಕ್ರದಲ್ಲಿ ಗಾಯತ್ರಿ ಇಹುದು. ಆಜ್ಞಾಚಕ್ರದಲ್ಲಿ ಅಜಪೆ ಇಹುದು ನೋಡಾ ಇದಕ್ಕೆ ನೀಲಕಂಠಸಂಹಿತಾಯಾ: ಆಧಾರೇ ಋಗ್ವೇದಶ್ಚೈವ ಸ್ವಾಧಿಷ್ಠೇ ಯಜುರ್ವೇದಕಂ | ಮಣಿಪೂರೇ ಚ ನಾಮಚ ಅತಃ ಶ್ರುತಿಶ್ಚನಾಹತೇ | ಗಾಯತ್ರಿಶ್ಚ ವಿಶುದ್ಧಿಶ್ಚ ಆಜ್ಞೇಯಾ ಅಜಪಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.