ಇನ್ನು ಇಷ್ಟ ಪ್ರಾಣ ಭಾವಲಿಂಗದ ಭೇದವೆಂತೆಂದಡೆ:
ಆದಿ ಉಕಾರ ಆದಿ ಮಕಾರ ಆದಿ ಅಕಾರ ಇವು ಮೂರು ಬೀಜಾಕ್ಷರ.
ಆದಿ ಉಕಾರವೆ ಆದಿನಾದ, ಆದಿ ಮಕಾರವೆ ಆದಿ ಬಿಂದು,
ಆದಿ ಅಕಾರವೆ ಆದಿಕಲೆ.
ಆದಿ ಉಕಾರವೆ ಇಷ್ಟಲಿಂಗ, ಆದಿ ಮಕಾರವೇ ಪ್ರಾಣಲಿಂಗ,
ಆದಿ ಅಕಾರವೆ ಭಾವಲಿಂಗವು ನೋಡಾ.
ಇದಕ್ಕೆ ಈಶ್ವರೋsವಾಚ:
ಉಕಾರಂ ಇಷ್ಟಲಿಂಗಂ ಚ ಮಕಾರಂ ಪ್ರಾಣಲಿಂಗಯೋ |
ಅಕಾರಂ ಭಾವಲಿಂಗಂ ಚ ತ್ರಿಧಾಏಕಂ ವರಾನನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.