ಇನ್ನು ಪ್ರಣವದ ಲಕ್ಷಣವದೆಂತೆಂದಡೆ:
ಪ್ರಥಮ ತಾರಕ ಸ್ವರೂಪವಾಗಿಹುದು.
ದ್ವಿತೀಯ ದಂಡಸ್ವರೂಪವಾಗಿಹುದು.
ತೃತೀಯ ಕುಂಡಲಾಕಾರವಾಗಿಹುದು.
ಚತುರ್ಥ ಅರ್ಧಚಂದ್ರಕಾಕಾರವಾಗಿಹುದು.
ಪಂಚಮ ದರ್ಪಣಾಕಾರವಾಗಿಹುದು.
ಷಷ್ಠಿ ಜ್ಯೋತಿಸ್ವರೂಪವಾಗಿಹುದು ನೋಡಾ.
ಇದಕ್ಕೆ ಈಶ್ವರೋsವಾಚ:
ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿಸ್ವರೂಪಕಂ |
ಇತಿ ಪ್ರಣವಂ ವಿಜ್ಞೇಯಂ ಯದ್ಗೋಪ್ಯಂ ವರಾರನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu praṇavada lakṣaṇavadentendaḍe:
Prathama tāraka svarūpavāgihudu.
Dvitīya daṇḍasvarūpavāgihudu.
Tr̥tīya kuṇḍalākāravāgihudu.
Caturtha ardhacandrakākāravāgihudu.
Pan̄cama darpaṇākāravāgihudu.
Ṣaṣṭhi jyōtisvarūpavāgihudu nōḍā.
Idakke īśvarōsvāca:
Prathamaṁ tārakārūpaṁ dvitīyaṁ daṇḍa ucyatē |
tr̥tīyaṁ kuṇḍalākāraṁ caturthaṁ cārdhacandrakaṁ ||
pan̄camaṁ darpaṇākāraṁ ṣaṣṭhaṁ jyōtisvarūpakaṁ |
iti praṇavaṁ vijñēyaṁ yadgōpyaṁ varāranē ||''
intendudāgi, apramāṇakūḍalasaṅgamadēvā