ಇನ್ನೊಂದು ಪ್ರಕಾರದ ಹಸ್ತ ಉತ್ಪತ್ಯವದೆಂತೆಂದಡೆ:
ಏನೂ ಏನೂ ಎನಲಿಲ್ಲದ ಪರಬ್ರಹ್ಮದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಭಾವಹಸ್ತದಲ್ಲಿ ಜ್ಞಾನಹಸ್ತ ಹುಟ್ಟಿತ್ತು.
ಆ ಜ್ಞಾನಹಸ್ತದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಸುಮನಹಸ್ತದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ನಿರಹಂಕಾರಹಸ್ತದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಸುಬುದ್ಧಿಹಸ್ತದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ.
ಇದಕ್ಕೆ ಈಶ್ವರೋsವಾಚ:
ವಸ್ತುನೋಭಾವಮುತ್ಪನ್ನಂ ಭಾವಾತ್ ಜ್ಞಾನಂ ಸಮುದ್ಭವಂ |
ಜ್ಞಾನಾಚ್ಚ ಮನಉತ್ಪನ್ನಂ ಮನಸೋsಹಂಕೃತಿಸ್ತ್ರಥಾ ||
ಅಹಂಕಾರಾತ್ತತೊ ಬುದ್ಧಿಃ ಬುದ್ಧ್ಯಾ ಚಿತ್ತಂ ಸಮುದ್ಭವಂ |
ಏಶೈಕಂತು ಸಮುತ್ಪನ್ನಂ ಸೂಕ್ಷ್ಮಂ ಸೂಕ್ಷ್ಮಂ ವರಾನನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innondu prakārada hasta utpatyavadentendaḍe:
Ēnū ēnū enalillada parabrahmadalli bhāvahasta huṭṭittu.
Ā bhāvahastadalli jñānahasta huṭṭittu.
Ā jñānahastadalli sumanahasta huṭṭittu.
Ā sumanahastadalli nirahaṅkārahasta huṭṭittu.
Ā nirahaṅkārahastadalli subud'dhihasta huṭṭittu.
Ā subud'dhihastadalli sucittahasta huṭṭittu nōḍā.
Idakke īśvarōsvāca:
Vastunōbhāvamutpannaṁ bhāvāt jñānaṁ samudbhavaṁ |
jñānācca mana'utpannaṁ manasōshaṅkr̥tistrathā ||
ahaṅkārāttato bud'dhiḥ bud'dhyā cittaṁ samudbhavaṁ |
ēśaikantu samutpannaṁ sūkṣmaṁ sūkṣmaṁ varānanē ||''
intendudāgi, apramāṇakūḍalasaṅgamadēvā.