ಇನ್ನೊಂದು ಪ್ರಕಾರದ ಲಿಂಗೋತ್ಪತ್ಯವದೆಂತೆಂದಡೆ:
ಮಹಾಲಿಂಗದಲ್ಲಿ ಪ್ರಸಾದಲಿಂಗ ಹುಟ್ಟಿತ್ತು.
ಆ ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಆ ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು.
ಆ ಶಿವಲಿಂಗದಲ್ಲಿ ಗುರುಲಿಂಗ ಹುಟ್ಟಿತ್ತು.
ಆ ಗುರುಲಿಂಗದಲ್ಲಿ ಆಚಾರಲಿಂಗ ಹುಟ್ಟಿತ್ತು.
ಈ ಆರು ಲಿಂಗವು ಒಂದೇ ಲಿಂಗ ನೋಡಾ.
ಇದಕ್ಕೆ ಈಶ್ವರೋsವಾಚ:
ಮಹಾಲಿಂಗ ಸಮಾಖ್ಯಾತಂ ಪ್ರಸಾದಂ ಲಿಂಗಮುದ್ಭವಂ |
ತತಃ ಪ್ರಸಾದಲಿಂಗೇ ಚ ಜಂಗಮಂ ಲಿಂಗಮುದ್ಭವಂ ||
ತಥಾ ಜಂಗಮಲಿಂಗಂ ಚ ಶಿವಲಿಂಗ ಸಮುದ್ಭವಂ |
ಶಿವಲಿಂಗ ಯಥಾಚೈವ ಗುರುಲಿಂಗಸಮುದ್ಭವಂ |
ಷಟ್ಸ್ಥಲಂ ಚ ಪರಿಚ್ಛೇಯಂ ಏಕೀಭಾವಂ ವಿಶೇಷತಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.