Index   ವಚನ - 524    Search  
 
ಅಪ್ಪುವೆ ಅಂಗವಾದ ಮಹೇಶ್ವರನು ಸುಬುದ್ದಿಯೆಂಬ ಹಸ್ತದಲ್ಲಿ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋsವಾಚ: ಮಾಹೇಶ್ವರೋ ಜಲಾಂಗಶ್ಚ ಬುದ್ಧಿಹಸ್ತೇನ ಸದ್ಗುರುಃ | ಜಿಹ್ವಾಮುಖೇ ರಸೋ ಭೇದಂ ಅರ್ಪಿತಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.