ಕಣ್ಣು ಕಂಡಲ್ಲದೆ ಮನ ನೆನೆಯದು.
ಆ ಮನ ನೆನೆದಲ್ಲಿಗೆ ಕಾಲು ನಡೆವುದು.
ಕಾಲು ನಡೆದಲ್ಲದೆ ಕಾರ್ಯವಾಗದು.
ಕಾಲೆಂದಡೆ ನೀ ಚರಿಸುವ ವರ್ತನೆ.
ಆ ವರ್ತನಾಚಾರವೆಲ್ಲವು ಲಿಂಗವು.
ಇದು ಕಾರಣ, ಲಿಂಗವ ಹಿಂಗಿದ ಮಾಟ
ಮೀಸಲಿಲ್ಲದ ಮನೆದೇವರ ಹಬ್ಬದಂತೆ!
ನಮ್ಮ ಗುಹೇಶ್ವರಲಿಂಗಕ್ಕೆ, ಇದೇ ಬೇಹ ಶೌಚ
ಕೇಳಾ ಚಂದಯ್ಯಾ.
Transliteration Kaṇṇu kaṇḍallade mana neneyadu.
Ā mana nenedallige kālu naḍevudu.
Kālu naḍedallade kāryavāgadu.
Kālendaḍe nī carisuva vartane.
Ā vartanācāravellavu liṅgavu.
Idu kāraṇa, liṅgava hiṅgida māṭa
mīsalillada manedēvara habbadante!
Nam'ma guhēśvaraliṅgakke, idē bēha śauca
kēḷā candayyā.
Hindi Translation आँख देखे बिना मन याद नहीं करता,
वह मन जहाँ याद करता पैर वहाँ तक चलेगा।
बिना पैर चले कार्य नहीं होता।
पैर कहे तो तू चलने की क्रिया।
वह सब क्रियाचार लिंग ।
इस कारण- लिंग से दूर हुई क्रिया
बिना मनौती कुलदेवता के त्योहार जैसे !
हमारे गुहेश्वर लिंग को।
यहीं पहरा, शौच सुन चंदय्या।
Translated by: Eswara Sharma M and Govindarao B N
Translated by: Eswara Sharma M and Govindarao B N