Index   ವಚನ - 526    Search  
 
ವಾಯುವೆ ಅಂಗವಾದ ಪ್ರಾಣಲಿಂಗಿ ಸುಮನವೆಂಬ ಹಸ್ತದಲ್ಲಿ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಶ್ರೀಮಹಾದೇವೋsವಾಚ: ಮನೋ ಹಸ್ತೇನ ವಾಯ್ವಂಗಂ ಪ್ರಾಣಲಿಂಗೀ ತಥೈವ ಚ | ಜಂಗಮೇ ತ್ವಙ್ಮುಖಂಚೈವ ಅರ್ಪಿತಂ ಸ್ಪರ್ಶಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.