Index   ವಚನ - 539    Search  
 
ಆ ಮಾಹೇಶ್ವರನಲ್ಲಿಯ ಶರಣಂಗೆ ಅಪ್ಪುವಿನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಜ್ಞಾನವೇ ಹಸ್ತ, ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಪ್ರಸಾದಲಿಂಗಮುಖದಲ್ಲಿ ಕಹಿಯಾದ ರುಚಿದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.