Index   ವಚನ - 541    Search  
 
ಇನ್ನು ಪ್ರಸಾದಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣದ ಭೇದವೆಂತೆಂದಡೆ: ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆಂಬ ಹಸ್ತದಲ್ಲಿ ಶಿವಲಿಂಗಕ್ಕೆ ನೇತ್ರವೆಂಬಮುಖದಲ್ಲಿ ಹರಿತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.