Index   ವಚನ - 550    Search  
 
ಆ ಪ್ರಾಣಲಿಂಗಿಯಲ್ಲಿಯ ಪ್ರಸಾದಿಗೆ ವಾಯುವಿನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ಮೃದುವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.