ಆ ಶರಣನಲ್ಲಿಯ ಪ್ರಾಣಲಿಂಗಿಗೆ
ಆಕಾಶದಲ್ಲಿಯ ವಾಯುವೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಮನವೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ.
ಆ ಜಂಗಮಲಿಂಗದ ಮುಖದಲ್ಲಿ
ಕೊಳಲು ನಾಗಸ್ವರ ಶಂಕುದೊಳಗಾಗಿ
ಪುಟ್ಟಿದ ಶಬ್ದದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā śaraṇanalliya prāṇaliṅgige
ākāśadalliya vāyuvē aṅga.
Ā aṅgakke sujñānadalliya sumanavē hasta.
Ā hastakke prasādaliṅgadalliya jaṅgamaliṅgavē liṅga.
Ā jaṅgamaliṅgada mukhadalli
koḷalu nāgasvara śaṅkudoḷagāgi
puṭṭida śabdadravyavanu samarpaṇavaṁ māḍi
tr̥ptiyanē bhōgisuvanu nōḍā
apramāṇakūḍalasaṅgamadēvā.