Index   ವಚನ - 569    Search  
 
ಇನ್ನು ಹೃದಯಂಗದಲ್ಲಿ ಮಹಾಲಿಂಗ ಸ್ವಾಯತವಾಗಿಹುದು. ಶ್ರೋತ್ರಾಂಗದಲ್ಲಿ ಪ್ರಸಾದಲಿಂಗ ಸ್ವಾಯತವಾಗಿಹುದು. ತ್ವಗಾಂಗದಲ್ಲಿ ಚರಲಿಂಗದ ಸ್ವಾಯತವಾಗಿಹುದು. ದೃಗಾಂಗದಲ್ಲಿ ಶಿವಲಿಂಗ ಸ್ವಾಯತವಾಗಿಹುದು. ಜಿಹ್ವಾಂಗದಲ್ಲಿ ಗುರುಲಿಂಗ ಸ್ವಾಯತವಾಗಿಹುದು. ಘ್ರಾಣಾಂಗದಲ್ಲಿ ಆಚಾರಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ವಾತುಲಾಗಮೇ: ಹೃದಯಾಂಗೇ ಮಹಾಲಿಂಗಂ ಶ್ರೋತ್ರಾಂಗೇತಿ ಪ್ರಸಾದಕಂ | ತ್ವಗಂಗೇ ಚರಲಿಂಗಂ ಚ ದೃಗಂಗೇ ಶಿವಲಿಂಗಕಂ || ಜಿಹ್ವಾಂಗೇ ಗುರುಲಿಂಗಂತು ನಾಶಿಕಾಂಗೇ ತಥೈವ ಚ | ಆಚಾರಲಿಂಗಮಾಶ್ರಾಂತಂ ಸುಪ್ರತಿಷ್ಠಿತಮೇವ ಹಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.