ತಾನೆ ಭಕ್ತ ತಾನೆ ಮಾಹೇಶ್ವರನು
ತಾನೆ ಪ್ರಸಾದಿ ತಾನೆ ಪ್ರಾಣಲಿಂಗಿ
ತಾನೆ ಶರಣ ತಾನೆ ಐಕ್ಯ ನೋಡಾ.
ತನ್ನಿಂದಧಿಕವಪ್ಪ ಘನವಿಲ್ಲವಾಗಿ ತಾನೆ ಷಟ್ಸ್ಥಲಬ್ರಹ್ಮ
ತಾನೆ ನಾದಬಿಂದುಕಲಾತೀತವಹ ಮಹಾಘನಲಿಂಗೈಕ್ಯ.
ತಾನಲ್ಲದೆ ಮತ್ತಾರುಂಟು ಹೇಳಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tāne bhakta tāne māhēśvaranu
tāne prasādi tāne prāṇaliṅgi
tāne śaraṇa tāne aikya nōḍā.
Tannindadhikavappa ghanavillavāgi tāne ṣaṭsthalabrahma
tāne nādabindukalātītavaha mahāghanaliṅgaikya.
Tānallade mattāruṇṭu hēḷā
apramāṇakūḍalasaṅgamadēvā.