Index   ವಚನ - 584    Search  
 
ಅಂಗಾಲಕಣ್ಣವರು ಮೈಯಲ್ಲಾ ಕಣ್ಣವರು ತಾನಿರ್ದಲ್ಲಿ, ಗಂಗಾಧರ ಗೌರೀಶ್ವರರು ತಾನಿರ್ದಲ್ಲಿ, ಶಂಕರ ಶಶಿಧರ ನಂದಿವಾಹನರು ತಾನಿರ್ದಲ್ಲಿ, ತ್ರಿಶೂಲ ಖಟ್ವಾಂಗಧರರು ತಾನಿರ್ದಲ್ಲಿ, ತನ್ನಿಂದಧಿಕರೊಬ್ಬರಿಲ್ಲವಾಗಿ ತಾನೆ ಸ್ವಯಂಭು ನೋಡಾ, ಅಪ್ರಮಾಣಕೂಡಲಸಂಗಮದೇವಾ.