Index   ವಚನ - 586    Search  
 
ಪೃಥ್ವಿ ಅಪ್ಪು ತೇಜ ವಾಯುವಾಕಾಶ ಚಂದ್ರ ಸೂರ್ಯ ಆತ್ಮರೆಂಬೀ ಅಷ್ಟತನುಮೂರ್ತಿಗಳು ತಾನಿರ್ದಲ್ಲಿ. ಹಿಮ, ಮಲಯ, ಶಕ್ತಿ, ವಿಂಧ್ಯ, ಮಹೇಂದ್ರ, ರುಕ್ಷವಂತ, ಸಹ್ಯವೆಂಬ ಸಪ್ತಕುಲಪರ್ವತಂಗಳು ತಾನಿರ್ದಲ್ಲಿ, ಲವಣ ಇಕ್ಷು ಸುರೆ ಅಮೃತ ದಧಿ ಕ್ಷೀರ ಶುದ್ಧಜಲವೆಂಬ ಸಪ್ತಸಮುದ್ರಂಗಳು ತಾನಿರ್ದಲ್ಲಿ, ಜಂಬುದ್ವೀಪ ಪ್ಲಕ್ಷದೀಪ ಕುಶದ್ವೀಪ ಶಾಕದ್ವೀಪ ಶಾಲ್ಮಲೀದ್ವೀಪ ಪುಷ್ಕರದ್ವೀಪ ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳು ತಾನಿರ್ದಲ್ಲಿ, ಸವಸ್ತಗ್ರಹರಾಶಿ ತಾರಾಪಥಂಗಳೆಲ್ಲ ತಾನಿರ್ದಲ್ಲಿ, ಪಿಂಡ ಬ್ರಹ್ಮಾಂಡಂಗಳು ತನ್ನಲ್ಲಿಯೆ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ?