Index   ವಚನ - 589    Search  
 
ಸಪ್ತಕೋಟಿ ಮಹಾಮಂತ್ರಂಗಳು ತಾನಿರ್ದಲ್ಲಿ, ತೊಂಬತ್ತುನಾಲ್ಕು ವ್ಯೋಮವ್ಯಾಪಿಪದಂಗಳು ತಾನಿರ್ದಲ್ಲಿ, ಅಕಾರಾದಿ ಕ್ಷಕಾರಾಂತವಾದ ಐವತ್ತೆರಡು ಅಕ್ಷರಂಗಳು ತಾನಿರ್ದಲ್ಲಿ, ಇನ್ನೂರ ಇಪ್ಪತ್ತುನಾಲ್ಕು ಭುವನಂಗಳು ತಾನಿರ್ದಲ್ಲಿ, ಮೂವತ್ತಾರು ತತ್ವಂಗಳು ತಾನಿರ್ದಲ್ಲಿ. ಷಟ್ಕಲೆ ದ್ವಾದಶಕಲೆ ಷೋಡಶಕಲೆಗಳು ತಾನಿರ್ದಲ್ಲಿ, ಅರುವತ್ತುನಾಲ್ಕು ಕಲೆಯ ಜ್ಞಾನಂಗಳು ತಾನಿರ್ದಲ್ಲಿ, ಇವೆಲ್ಲವು ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಾದ ಕಾರಣ ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ, ತಾನೆ ಪರಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.