ಕರಸ್ಥಲದ ಲಿಂಗ ಮನಸ್ಥಲದಲ್ಲಿ ವೇದ್ಯವಾಗಿ
ಮನಸ್ಥಲದ ಲಿಂಗ ಸರ್ವಾಂಗದಲ್ಲಿ ವೇದ್ಯವಾದ ಬಳಿಕ
ಇನ್ನು ಭಿನ್ನಭಾವಕ್ಕೆ ತೆರಹುಂಟೆ?
ಗುಹೇಶ್ವರಲಿಂಗವ ಬೆರಸಿ ಸಮರಸವಾದ ಬಳಿಕ
ಎರಡೆಂಬುದಿಲ್ಲ ನೋಡಾ ಚೆನ್ನಬಸವಣ್ಣಾ.
Hindi Translationकरस्थल का लिंग मनस्थल में वेद्य बने,
मनस्थल का लिंग सर्वांग में वेद्य होने के बाद
क्या और भिन्नभाव को अवकाश है?
गुहेश्वर लिंगमिलकर समरस होने के बाद
दो कहना नहीं देख चेन्नबसवण्णा ।
Translated by: Eswara Sharma M and Govindarao B N