Index   ವಚನ - 609    Search  
 
ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ -ಈ ಮೂರು ಬೀಜಾಕ್ಷರ. ಆದಿ ಮಕಾರಪ್ರಣವವೆ ಆದಿಕಲೆ, ಆದಿ ಅಕಾರಪ್ರಣವವೆ ಆದಿನಾದ, ಆದಿ ಉಕಾರಪ್ರಣವವೆ ಆದಿಬಿಂದು ಆದಿ ಮಕಾರಪ್ರಣವವೇ ಸರ್ವಾತ್ಮನು. ಆದಿ ಅಕಾರಪ್ರಣವವೇ ಪರಮಾತ್ಮನು. ಆದಿ ಉಕಾರಪ್ರಣವವೇ ಶಿವಾತ್ಮನು ನೋಡಾ. ಇದಕ್ಕೆ ಈಶ್ವರೋsವಾಚ: ಅಕಾರಂ ಪರಾತ್ಪರಾತ್ಮಂ ಉಕಾರಂ ಶಿವಾತ್ಮೋ ಭವೇತ್ | ಮಕಾರಂ ಸರ್ವಾತ್ಮೈವ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.