ಆ ಅಖಂಡಮಹಾಜ್ಯೋತಿಪ್ರಣವದ
ಅರ್ಧಚಂದ್ರಕಸ್ವರೂಪವಾಗಿಹ
ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ,
ಮನ, ತ್ವಕ್ಕು, ಪಾಣೇಂದ್ರಿಯವೆಂಬ
ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ:
ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಯತೇ |
ಷಟ್‍ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍamahājyōtipraṇavada
ardhacandrakasvarūpavāgiha
brahmānandabrahmadalli īśvara, vāyu, sparśa,
mana, tvakku, pāṇēndriyavemba
ī āru tatvaṅgaḷu utpatyavāyittu nōḍā.
Idakke niran̄janātītāgamē:
Īśvarō vāyu sansparśē manastatvāni ucyatē |
ṣaṭsam'miśritaṁ yastu brahmānandaśca kathyatē ||''
intendudāgi, apramāṇakūḍalasaṅgamadēvā