Index   ವಚನ - 639    Search  
 
ಇನ್ನು ನಿರಾಮಯ ಭಕ್ತಂಗೆ ನಿರಾಮಯವೇ ಅಂಗ. ನಿರಾಮಯವೆ ಹಸ್ತ, ನಿರಾಮಯವೇ ಆಚಾರಲಿಂಗ. ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.