Index   ವಚನ - 648    Search  
 
ಪರತತ್ತ್ವದ ತೇಜದ ಮೇಲೆ ನಿರಂಜನ ಮಣಿಪೂರಕಚಕ್ರ. ಅಲ್ಲಿಯ ಪದ್ಮ ಮೂರುನೂರರುವತ್ತುದಳದಪದ್ಮ. ಆ ಪದ್ಮದ ವರ್ಣ ಎಂಬತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಮೂರುನೂರರುವತ್ತಕ್ಷರ; ಆ ಅಕ್ಷರ ವರ್ಣಾತೀತವಾಗಿಹುದು. ಅಲ್ಲಿಯ ಶಕ್ತಿ ನಿತ್ಯಾನಂದಶಕ್ತಿ; ವಿಮಲಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ಅಮಲಾನಂದವೆಂಬ ಮಹಾನಾದ. ಅಲ್ಲಿಯ ಬೀಜಾಕ್ಷರ ಅಖಂಡಮಹಾಜ್ಯೋತಿಪ್ರಣಮ ನೋಡಾ ಅಪ್ರಮಾಣಕೂಡಲಸಂಗಮದೇವಾ.