ಜಾಗ್ರದಲ್ಲಿಯ ಜಾಗ್ರವಾವುದು?
ಪುರುಷನೊಬ್ಬ, ವಾಯು ಹತ್ತು,
ನಾಡಿ ನಾಲ್ಕು, ಶಬ್ದಾದಿಗಳೈದು, ವಚನಾದಿಗಳೈದು,
ಶ್ರೋತ್ರಾದಿಗಳೈದು, ವಾಗಾದಿಗಳೈದು-
ಈ ಮೂವತ್ತೈದು ಕಾರಣಂಗಳೊಡನೆ ಕೂಡಿ
ಇವನ ತಬ್ಬಿಕೊಳ್ಳುತ್ತ ಪ್ರಿಯವ ಮಾಡುವದು
ಜಾಗ್ರದಲ್ಲಿಯ ಜಾಗ್ರ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jāgradalliya jāgravāvudu?
Puruṣanobba, vāyu hattu,
nāḍi nālku, śabdādigaḷaidu, vacanādigaḷaidu,
śrōtrādigaḷaidu, vāgādigaḷaidu-
ī mūvattaidu kāraṇaṅgaḷoḍane kūḍi
ivana tabbikoḷḷutta priyava māḍuvadu
jāgradalliya jāgra nōḍā
apramāṇakūḍalasaṅgamadēvā.