ಮತ್ತಂ, ಆ ಪ್ರಣವದ ದರ್ಪಣಾಕಾರದಲ್ಲಿ
ಈಶಾನ್ಯಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ
ಸದ್ಯೋಜಾತಮುಖ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಓಂಕಾರ ತಾರಕಾರೂಪೇ ಸದ್ಯೋಜಾತಂ ಚ ಜಾಯತೇ |
ಓಂಕಾರ ದಂಡರೂಪೇ ಚ ವಾಮದೇವಂ ಚ ಜಾಯತೇ ||
ಓಂಕಾರ ಕುಂಡಲಾಕಾರೇ ಅಘೋರಂ ಚಾಪಿ ಜಾಯತೇ |
ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ ||
ಓಂಕಾರ ದರ್ಪಣಾಕಾರೇ ಈಶಾನಂ ಚ ಜಾಯತೇ |
ಇತಿ ಪಂಚಮುಖಂ ದೇವೀ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mattaṁ, ā praṇavada darpaṇākāradalli
īśān'yamukha utpatyavāyittu.
Ā praṇavada ardhacandrakadalli tatpuruṣamukha utpatyavāyittu.
Ā praṇavada kuṇḍalākāradalli aghōramukha utpatyavāyittu.
Ā praṇavada daṇḍasvarūpadalli vāmadēvamukha utpatyavāyittu.
Ā praṇavada tārakasvarūpadalli
sadyōjātamukha utpatyavāyittu nōḍā.
Idakke mahāvātulāgamē:
Ōṅkāra tārakārūpē sadyōjātaṁ ca jāyatē |
ōṅkāra daṇḍarūpē ca vāmadēvaṁ ca jāyatē ||
ōṅkāra kuṇḍalākārē aghōraṁ cāpi jāyatē |
ōṅkāra ardhacandrē ca tatpuruṣaṁ ca jāyatē ||
ōṅkāra darpaṇākārē īśānaṁ ca jāyatē |
iti pan̄camukhaṁ dēvī sthānasthānēṣu jāyatē ||''
intendudāgi,
apramāṇakūḍalasaṅgamadēvā.