Index   ವಚನ - 724    Search  
 
ಆಕಾಶ ಚೈತನ್ಯ ಭಾವ ಕರ್ತ ಕ್ಷೇತ್ರಜ್ಞ ಶಿವನು- ಈ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಶಿವಕ್ಷೇತ್ರಜ್ಞಕರ್ತಾರಂ ಭಾವಂ ಚೈತನ್ಯಮಂತರಂ | ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮಣಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.