ಇನ್ನು ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರಪ್ರಣವದ
ತಾರಕಾಸ್ವರೂಪ, ದಂಡಸ್ವರೂಪ, ಕುಂಡಲಾಕಾರ, ಅರ್ಧಚಂದ್ರಕ,
ದರ್ಪಣಾಕಾರ, ಜ್ಯೋತಿಸ್ವರೂಪದಲ್ಲಿಹ
ಪಂಚಾಕ್ಷರ ಚಿದಾತ್ಮ ಪರಮಾತ್ಮನ
ಐಕ್ಯವದೆಂತೆಂದಡೆ:
ಆ ಪ್ರಣವದ ತಾರಕಾಸ್ವರೂಪದಲ್ಲಿಹ ನಕಾರವು
ಆ ಪ್ರಣವದ ತಾರಕಾಸ್ವರೂಪದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರವು
ಆ ಪ್ರಣವದ ದಂಡಸ್ವರೂಪದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರವು
ಆ ಪ್ರಣವದ ಕುಂಡಲಾಕಾರದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಯ ವಕಾರವು
ಆ ಪ್ರಣವದ ಅರ್ಧಚಂದ್ರಕದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರವು
ಆ ಪ್ರಣವದ ದರ್ಪಣಾಕಾರದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮರಿಬ್ಬರೂ
ಆ ಪ್ರಣವದ ಜ್ಯೋತಿಸ್ವರೂಪದಲ್ಲಿಯೇ ಐಕ್ಯವಾದರು ನೋಡಾ.
ಇದಕ್ಕೆ ಮೂಲಾಗಮೇ:
ಓಂಕಾರ ತಾರಕರೂಪೇ ನಕಾರಂ ಚ ವಿಲೀಯತೇ |
ಓಂಕಾರ ದಂಡಕರೂಪೇ ಚ ಮಕಾರಂ ಚಾಪಿ ಜಾಯತೇ ||
ಓಂಕಾರ ಕುಂಡಲಾಕಾರೇ ಶಿಕಾರಂ ಲೀಯತೇ ತಥಾ |
ಓಂಕಾರಾರ್ಧಚಂದ್ರೇ ಚ ವಕಾರಂ ಚಾಪಿ ಲೀಯತೇ ||
ಓಂಕಾರ ದರ್ಪಣಾಕಾರೇ ಯಕಾರಂ ಲೀಯತೇ ತಥಾ ||
ಓಂಕಾರ ಜ್ಯೋತಿಸ್ವರೂಪೇ ಚಿತ್ಪರಂ ಚಾಪಿ ಲೀಯತೇ |
ಇತ್ಯಕ್ಷರಂ ಐಕ್ಯಂ ಜ್ಞಾನಂ ದುರ್ಲಭಂ ಕಮಲಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu akhaṇḍajyōtirmayavāgiha
gōḷakākārapraṇavada
tārakāsvarūpa, daṇḍasvarūpa, kuṇḍalākāra, ardhacandraka,
darpaṇākāra, jyōtisvarūpadalliha
pan̄cākṣara cidātma paramātmana
aikyavadentendaḍe:
Ā praṇavada tārakāsvarūpadalliha nakāravu
ā praṇavada tārakāsvarūpadalliyē aikyavāyittu.
Ā praṇavada daṇḍasvarūpadalliha makāravu
ā praṇavada daṇḍasvarūpadalliyē aikyavāyittu.
Ā praṇavada kuṇḍalākāradalliha śikāravu
ā praṇavada kuṇḍalākāradalliyē aikyavāyittu.
Ā praṇavada ardhacandrakadalliya vakāravu
ā praṇavada ardhacandrakadalliyē aikyavāyittu.
Ā praṇavada darpaṇākāradalliha yakāravu
ā praṇavada darpaṇākāradalliyē aikyavāyittu.
Ā praṇavada jyōtisvarūpadalliha cidātma paramātmaribbarū
ā praṇavada jyōtisvarūpadalliyē aikyavādaru nōḍā.
Idakke mūlāgamē:
Ōṅkāra tārakarūpē nakāraṁ ca vilīyatē |
ōṅkāra daṇḍakarūpē ca makāraṁ cāpi jāyatē ||
ōṅkāra kuṇḍalākārē śikāraṁ līyatē tathā |
ōṅkārārdhacandrē ca vakāraṁ cāpi līyatē ||
ōṅkāra darpaṇākārē yakāraṁ līyatē tathā ||
ōṅkāra jyōtisvarūpē citparaṁ cāpi līyatē |
ityakṣaraṁ aikyaṁ jñānaṁ durlabhaṁ kamalānanē ||''
intendudāgi,
apramāṇakūḍalasaṅgamadēvā.