ಇನ್ನು ಷಡ್ವಿಧಮುಖಂಗಳ ನಿವೃತ್ತಿ ಅದೆಂತೆಂದಡೆ:
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ಸದ್ಯೋಜಾತಮುಖವಡಗಿತ್ತು
ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ನಿರ್ಭಾವಮುಖವಡಗಿತ್ತು ನೋಡಾ.
ಇದಕ್ಕೆ ಚತ್ಪಿಂಡಾಗಮೇ:
ಓಂಕಾರ ತಾರಕರೂಪೇ ಸದ್ಯೋಜಾತಶ್ಚ ಲೀಯತೇ |
ಓಂಕಾರ ದಂಡರೂಪೇ ಚ ವಾಮದೇವ ವಕ್ತ್ರಂಚ ಲೀಯತೇ ||
ಓಂಕಾರ ಕುಂಡಲಾಕಾರೇ ಅಘೋರವಕ್ತ್ರಂಚ ಲೀಯತೇ |
ಓಂಕಾರ ಅರ್ಧಚಂದ್ರೇ ಚ ತತ್ಪುರುಷಶ್ಚ ಲೀಯತೇ ||
ಓಂಕಾರ ದರ್ಪಣಾಕಾರೇ ಈಶಾನಶ್ಚ ವಿಲೀಯತೇ |
ಓಂಕಾರ ಜ್ಯೋತಿರೂಪೇ ಚ ನಿರ್ಭಾವಃ ತತ್ರ ಲೀಯತೇ |
ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhamukhaṅgaḷa nivr̥tti adentendaḍe:
Akhaṇḍajyōtirmayavāgiha gōḷakākārapraṇavada
tārakasvarūpadalli sadyōjātamukhavaḍagittu
ā praṇavada daṇḍakasvarūpadalli vāmadēvamukhavaḍagittu.
Ā praṇavada kuṇḍalākāradalli aghōramukhavaḍagittu.
Ā praṇavada ardhacandrakadalli tatpuruṣamukhavaḍagittu.
Ā praṇavada darpaṇākāradalli īśānamukhavaḍagittu.
Ā praṇavada jyōtisvarūpadalli nirbhāvamukhavaḍagittu nōḍā.
Idakke catpiṇḍāgamē:
Ōṅkāra tārakarūpē sadyōjātaśca līyatē |
ōṅkāra daṇḍarūpē ca vāmadēva vaktran̄ca līyatē ||
ōṅkāra kuṇḍalākārē aghōravaktran̄ca līyatē |
ōṅkāra ardhacandrē ca tatpuruṣaśca līyatē ||
ōṅkāra darpaṇākārē īśānaśca vilīyatē |
ōṅkāra jyōtirūpē ca nirbhāvaḥ tatra līyatē |
iti ṣaṣṭhamukhaṁ dēvi sthānasthānē vilīyatē ||''
intendudāgi,
apramāṇakūḍalasaṅgamadēvā.