Index   ವಚನ - 769    Search  
 
ಇನ್ನು ಲಿಂಗದ ತಾಮಸನಿರಸನವದೆಂತೆಂದಡೆ: ಅನಂತಕೋಟಿ ಬ್ರಹ್ಮರು, ಅನಂತಕೋಟಿ ವಿಷ್ಣ್ವಾದಿಗಳು, ಅನಂತಕೋಟಿ ಇಂದ್ರಾದಿಗಳು, ಅನಂತಕೋಟಿ ದೇವರ್ಕಳು, ಇವರೆಲ್ಲ ಎಲ್ಲಿ ಹುಟ್ಟುವರು ಅದೇ `ಗಂ' ಎಂಬ ಶಬ್ದ. ಇದಕ್ಕೆ ಅಖಂಡಾಗಮೇ: ಅಸಂಖ್ಯಾತಮಹಾವಿಷ್ಣುಃ ಅಸಂಖ್ಯಾತಪಿತಾಮಹಾಃ | ಅಸಂಖ್ಯಾತಸುರೇಂದ್ರಾಣಾಂ ಲೀಯತೇ ಸರ್ವದೇವತಾಃ || ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತಪಿತಾಮಹಾಃ | ಅಸಂಖ್ಯಾತಸುರೇಂದ್ರಾಣಾಂ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರಬ್ರಹ್ಮ ವಿಷ್ಣ್ವಾದಿ ದೇವತಾಃ | ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ವಂ ಪರಾಯಣೈಃ ||'' ಎಂದುದಾಗಿ, ಅಂಥ ಅಖಂಡ ಪರಿಪೂರ್ಣ ಅಪ್ರಮೇಯ ಅಗಮ್ಯ ಅವ್ಯಕ್ತ ಅನಂತತೇಜ ಅಪ್ರಮಾಣ ಅಗೋಚರವಾಗಿಹ ಅಖಂಡಮಹಾಘನಲಿಂಗವೇ ಲಿಂಗವಲ್ಲದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ಪದಾರ್ಥಂಗಳಲ್ಲಿ ಅಬದ್ಧವಾಗಿ ಬಿದ್ದಿಹ ಲಿಂಗಂಗಳೆಲ್ಲವೂ ಮೋಕ್ಷವನೈದಲರಿಯವು ನೋಡಾ. ಇದಕ್ಕೆ ವೀರಾಗಮೇ: ವಿತ್ತಂಚ ಕಾಮಿನೀಚೈವ ಕ್ಷೇತ್ರಂ ಭೂಮೀ ತಥೈವ ಚ | ತ್ರಿವಿಧಾಪೇಕ್ಷಲಿಂಗಾನಾಂ ಕಥಂ ಮುಕ್ತಿಃ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ