Index   ವಚನ - 775    Search  
 
ಹೊನ್ನ ಬಿಟ್ಟಡೆ ಹಿರಿಯರೆಂಬೆನೆ? ಅಲ್ಲಲ್ಲ ನೋಡಾ. ಹೆಣ್ಣ ಬಿಟ್ಟಡೆ ಹಿರಿಯರೆಂಬೆನೆ? ಅಲ್ಲಲ್ಲ ನೋಡಾ. ಮಣ್ಣ ಬಿಟ್ಟಡೆ ಹಿರಿಯರೆಂಬೆನೆ? ಅಲ್ಲಲ್ಲ ನೋಡಾ. ಈ ತ್ರಿವಿಧವು ಒಂದಬಿಟ್ಟೊಂದಿರದಾಗಿ, ಈ ತ್ರಿವಿಧವನತಿಗಳೆದು ಮಹಾಘನದಲ್ಲಿ ಮನ ಲೀಯವಾಗಿ ಸುಳಿವ ನಿಜಸುಳಿವಿಂಗೆ ನಮೋ ನಮೋ ಎಂಬೆ ನೋಡಾ ಅಪ್ರಮಾಣಕೂಡಲಸಂಗಮದೇವಾ.