Index   ವಚನ - 794    Search  
 
ಅರಿದಾತ ದುಃಖಕ್ಕೊಳಗಾಗದೆ ಅಂಧಃಕಾರವ ಮುಚ್ಚಿಕೊಂಡು ಕಾಣಲಾರದಿದ್ದ ಮಹಾಮಾಯೆಯ ಕೆಡೆಮೆಟ್ಟಿ ಮೇಲಾಗಿಹ ಈಶಾನ್ಯತೂರ್ಯಬೋಧೆಯ ತಿಳಿದು ಕಂಡಡೆ ಮುಕ್ತಿಯಹದು ನೋಡಾ ಅಪ್ರಮಾಣಕೂಡಲಸಂಗಮದೇವಾ.