Index   ವಚನ - 818    Search  
 
ರೂಪಿಲ್ಲದವನರಿದನೆಂದು ನಿರೂಪಲ್ಲದ ಮಾಮರದ ತುದಿಗೆ ಮೆಲಲಿಲ್ಲದ ಹಣ್ಣ ಮೆದ್ದು ಪರಿಣಾಮಿಸಿ ಬಯಲಿಲ್ಲದ ನಿರ್ವಯಲಲ್ಲಿ ಬಯಲಾದನು ನೋಡಾ ಅಪ್ರಮಾಣಕೂಡಲಸಂಗಮದೇವಾ.