Index   ವಚನ - 827    Search  
 
ಊರ್ಧ್ವಮುಖ ಅಧೋಮುಖ ಸಮಾದಿಷ್ಟಿಯೆಂದು ಅಂತರಂಗದಲ್ಲಿ ತ್ರಿವಿಧಮುಖಂಗಳುಂಟು. ಅದೆಂತೆಂದಡೆ: ಊರ್ಧ್ವಮುಖ ಹದಿನಾರು ಮುಖವಾಗಿಹುದು. ಅಧೋಮುಖ ಮೂವತ್ತೆರಡು ಮುಖವಾಗಿಹುದು. ಸಮಾದಿಷ್ಟಿ ಅರುವತ್ತುನಾಲ್ಕು ಮುಖವಾಗಿಹುದು. ಈ ತ್ರಿವಿಧ ಮುಖವನರಿದು ಅರ್ಚಿಸಿ, ಸಚ್ಚಿದಾನಂದವೆಂಬ ದ್ರವ್ಯವ ತ್ರಿವಿಧಮುಖದಲ್ಲಿ ಅರ್ಪಿಸಬಲ್ಲಾತ ತ್ರಿವಿಧಪ್ರಸಾದಿ, ತ್ರಿವಿಧಪರಿಣಾಮಿ, ತ್ರಿವಿಧಐಕ್ಯ ತಾನಾದ ಶರಣ ನೋಡಾ ಅಪ್ರಮಾಣಕೂಡಲಸಂಗಮದೇವಾ.