Index   ವಚನ - 829    Search  
 
ರೂಪಿಲ್ಲದೆ ಇಹುದು ನೋಡಾ ಜೀವಾತ್ಮನು. ನೆಲೆಯಿಲ್ಲದೆ ಇಹುದು ನೋಡಾ ಅಂತರಾತ್ಮನು. ಜೀವಾಂತರಾದಿಗಳ ಶಿರೋಮಧ್ಯದಲ್ಲಿ ಯಂತ್ರವಾಹಕನಾಗಿ ಆಡಿಸುತ್ತಿಹನು ನೋಡಾ ಪರಮಾತ್ಮನು ಅಪ್ರಮಾಣಕೂಡಲಸಂಗಮದೇವಾ.