ಶಿವನು ಐದಕ್ಷರವು ಆಗಬಲ್ಲ, ಐದು ವರ್ಣವು ಆಗಬಲ್ಲ,
ನಿರ್ಮಲನು ಆಗಬಲ್ಲ, ನಿಃಕಲನು ಆಗಬಲ್ಲನು.
ನಿಃಕಲಾತೀತನಾಗಿ ಏನೂ ಎನಲಿಲ್ಲದ ಮಹಾಘನಶೂನ್ಯನಾಗಬಲ್ಲನಯ್ಯಾ,
ನಮ್ಮ ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Śivanu aidakṣaravu āgaballa, aidu varṇavu āgaballa,
nirmalanu āgaballa, niḥkalanu āgaballanu.
Niḥkalātītanāgi ēnū enalillada mahāghanaśūn'yanāgaballanayyā,
nam'ma apramāṇakūḍalasaṅgamadēva.