ಪರಧನ ಪರಸ್ತ್ರೀ ಪರಾನ್ನದಾಸೆಯ ಬಿಡದೆ,
ನಿಂದೆ ಸ್ತುತಿಗಳೆರಡು ಸಮವಾಗದೆ,
ಮಾಗಿಯ ಕೋಗಿಲೆಯಂತೆ ಮೂಗನಾಗಿರಲರಿಯದೆ,
ಬಯಲಬ್ರಹ್ಮವ ನುಡಿವ ತರ್ಕಿಗಳ ಕೂಡೆ ತರ್ಕವ ಮಾಡಿ,
ಶರಣನೆಂದು ಸುಳಿದಡೆ ಪಂಚಮಹಾಪಾತಕ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Paradhana parastrī parānnadāseya biḍade,
ninde stutigaḷeraḍu samavāgade,
māgiya kōgileyante mūganāgiralariyade,
bayalabrahmava nuḍiva tarkigaḷa kūḍe tarkava māḍi,
śaraṇanendu suḷidaḍe pan̄camahāpātaka nōḍā
apramāṇakūḍalasaṅgamadēvā.