ಅಂದು ಮೊದಲಾಗಿ ಇಂದು ಕಡೆಯಾಗಿ
ಆ ಪರಾಪರದಲ್ಲಿ ಲೀಯವಾದ ಶರಣರಿಗೆ
ಅಂಥಾದಿಂಥಾದೆಂದು ಹೇಳಬಾರದು.
ಉಪಮಾತೀತವ ಹೇಂಗಿದ್ದುದೆಂದಡೆ,
ಹಾಂಗೆ ಇದ್ದುದು ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Andu modalāgi indu kaḍeyāgi
ā parāparadalli līyavāda śaraṇarige
anthādinthādendu hēḷabāradu.
Upamātītava hēṅgiddudendaḍe,
hāṅge iddudu nōḍā,
apramāṇakūḍalasaṅgamadēvā.