Index   ವಚನ - 896    Search  
 
ನಿರಂಜನಪ್ರಣವ ಅವಾಚ್ಯಪ್ರಣವ ಉತ್ಪತ್ಯವಾಗದತ್ತತ್ತ, ಕಲಾಪ್ರಣವ ಅನಾದಿಪ್ರಣವ ಉತ್ಪತ್ಯವಾಗದತ್ತತ್ತ, ಅಕಾರ ಉಕಾರ ಮಕಾರವೆಂಬ ಬೀಜ ಉತ್ಪತ್ಯವಾಗದತ್ತತ್ತ, ನಾದ ಬಿಂದು ಕಳೆ ಉತ್ಪತ್ಯವಾಗದತ್ತತ್ತ, ಪ್ರಕೃತಿ ಪ್ರಾಣ ಓಂಕಾರ ಉತ್ಪತ್ಯವಾಗದತ್ತತ್ತ, ಲೋಕಾದಿಲೋಕಂಗಳೇನೂ ಉತ್ಪತ್ಯವಾಗದತ್ತತ್ತ, ನಿರಂಜನಪ್ರಣವಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.