Index   ವಚನ - 904    Search  
 
ನಿರಂಜನಪ್ರಣವದ ನೆನಹುಮಾತ್ರದಿಂದ ಅವಾಚ್ಯಪ್ರಣವ ಉತ್ಪತ್ಯವಾಯಿತ್ತು. ಇನ್ನು ಅವಾಚ್ಯಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ: ನಿರಾಳಶಾಂತ್ಯತೀತೋತ್ತರಕಲೆ, ನಿರಾಳ ಶಾಂತ್ಯತೀತ ಕಲೆಗಳಿಲ್ಲದಂದು, ನಿರಾಳಶಾಂತಿಕಲೆ ನಿರಾಳವಿದ್ಯಾಕಲೆಗಳಿಲ್ಲದಂದು, ನಿರಾಳಪ್ರತಿಷ್ಠಾಕಲೆ ನಿರಾಳನಿವೃತ್ತಿಕಲೆಗಳಿಲ್ಲದಂದು, ನಿರಾಳಮಹಾಸಾದಾಖ್ಯ ನಿರಾಳಮೂರ್ತಿಸಾದಾಖ್ಯವಿಲ್ಲದಂದು, ನಿರಾಳಕರ್ತೃಸಾದಾಖ್ಯ ನಿರಾಳಕರ್ಮಸಾದಾಖ್ಯವಿಲ್ಲದಂದು, ಅವಾಚ್ಯ ಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.