Index   ವಚನ - 920    Search  
 
ತಾನೆ ಶಿವಪ್ರಣವ, ತಾನೆ ಶಕ್ತಿಪ್ರಣವ, ತಾನೆ ಶಿವಶಕ್ತಿರಹಿತವಾಗಿಹ ಮಹಾಪ್ರಣವ ನೋಡಾ. ತಾನೆ ಆದಿಪ್ರಣವ, ತಾನೆ ಅನಾದಿಪ್ರಣವ, ತಾನೆ ಕಲಾಪ್ರಣವ ನೋಡಾ. ತಾನೆ ಅವಾಚ್ಯಪ್ರಣವ, ತಾನೆ ನಿರಂಜನಪ್ರಣವ, ತಾನೆ ನಿರಾಮಯಪ್ರಣವ ನೋಡಾ, ತನ್ನಿಂದಧಿಕವಾದ ಪ್ರಣವವೊಂದಿಲ್ಲವಾಗಿ ತಾನೇ ನಿರಂಜನಾತೀತಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.